ಗಿಲ್ಲಿ ಧ್ವನಿಸುರುಳಿ ಬಿಡುಗಡೆ

Gilli
MOKSHENDRA
ಜಗ್ಗೇಶ್ ಮಗ ಗುರುರಾಜ್ ನಾಯಕನಾಗಿ ಅಭಿನಯಿಸುತ್ತಿರುವ ಗಿಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಇತ್ತೀಚೆಗೆ ಗ್ರೀನ್ ಹೌಸ್‌ನಲ್ಲಿ ನಡೆದಿದೆ. ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದವಾಗಿದೆ.

ಮಗ ನಟಿಸುತ್ತಿರುವ ಚಿತ್ರದ ಧ್ವನಿಸುರುಳಿಯ ಬಿಡುಗಡೆ ಮಾಡಿದ್ದು ಸ್ವತಃ ಅಪ್ಪ. ಅರ್ಥಾತ್ ಜಗ್ಗೇಶ್. ತಮ್ಮ ಮಗನ ಮೊದಲ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಚಿತ್ರರಂಗದಲ್ಲಿ ಎಲ್ಲರಿಗೂ ಸುಲಭವಾಗಿ ಅವಕಾಶ ದೊರಕುವುದಿಲ್ಲ. ಕಷ್ಟಪಟ್ಟರೆ ಮಾತ್ರ ಚಿತ್ರರಂಗದಲ್ಲಿ ಬೆಳೆಯಲು ಸಾಧ್ಯ. ವೃತ್ತಿಯನ್ನು ಪ್ರೀತಿಸಿ ಗೌರವ ಕೊಡಬೇಕು ಎಂದು ಈ ಸಂದರ್ಭದಲ್ಲಿ ಮಗನಿಗೆ ಕಿವಿಮಾತು ಹೇಳಿದ್ದಾರೆ.

ಇಳಯರಾಜ|
ಗಿಲ್ಲಿ ಚಿತ್ರವನ್ನು ರಾಘವ ಲೋಕೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಣಜಿ ನಾಗರಾಜ್, ಜಯಣ್ಣ ಹಾಗೂ ವಿಜಯ್ಕಿರಣ್ ನಿರ್ಮಾಪಕ ಹೊಣೆ ಹೊತ್ತಿದ್ದಾರೆ. ಗಿಲ್ಲಿ ತಮಿಳ್ ಚಿತ್ರದ ರಿಮೇಕ್. ಗುರುರಾಜ್ ಚಿತ್ರದಲ್ಲಿ ಅಂದುಕೊಂಡದ್ದಕ್ಕಿಂತ ಉತ್ತಮವಾಗಿ ನಟಿಸಿದ್ದಾರೆ. ಚಿತ್ರ ಸೊಗಸಾಗಿ ಮೂಡಿಬಂದಿದೆ. ಯಶಸ್ಸು ಸಿಗತ್ತದೆ ಎಂಬ ನಂಬಿಕೆ ನನಗಿದೆ ಎಂದರು ನಿರ್ದೇಶಕ ರಾಘವ ಲೋಕೇಶ್.


ಇದರಲ್ಲಿ ಇನ್ನಷ್ಟು ಓದಿ :