ಬೆಂಗಳೂರು: 2020 ಯಾಕೋ ಸಿನಿಮಾ ರಂಗಕ್ಕಂತೂ ಒಂದಾದ ಮೇಲೊಂದು ಆಘಾತ ನೀಡುತ್ತಿದೆ. ಕೊರೋನಾಘಾತದ ನಡುವೆ ಒಬ್ಬೊಬ್ಬರೇ ಪ್ರತಿಭಾವಂತ ನಟರು ಇದ್ದಕ್ಕಿದ್ದಂತೆ ನಮ್ಮನ್ನು ಅಗಲಿ ಮತ್ತಷ್ಟು ಆಘಾತ ನೀಡಿದ್ದಾರೆ.ಈ ವರ್ಷ ಆರಂಭವಾಗಿ ಇನ್ನೂ ಐದೂವರೆ ತಿಂಗಳು ಕಳೆದಿದೆಯಷ್ಟೇ. ಅದರಲ್ಲೂ ಏಪ್ರಿಲ್ ನಿಂದ ಇಂದಿನವರೆಗೆ ಸಾಲು ಸಾಲು ನಟ-ನಟಿಯರನ್ನು ಕಳೆದುಕೊಂಡಿದ್ದೇವೆ.ಏಪ್ರಿಲ್ 6 ರಂದು ಬುಲೆಟ್ ಪ್ರಕಾಶ್ ಬಹುಅಂಗಾಂಗ ವೈಕಲ್ಯದಿಂದ ತೀರಿಕೊಂಡಿದ್ದರು. ಅದಾದ ಬಳಿಕ ಏಪ್ರಿಲ್ 29 ರಂದು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್