ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ಮಾಡುತ್ತಾ ಯಶಸ್ವೀ ಪ್ರದರ್ಶನ ಮಾಡುತ್ತಿದೆ.ದೀಪಾವಳಿ ಹಬ್ಬದ ಪ್ರಯುಕ್ತ ಕೊಯಮತ್ತೂರಿನ ಇಶಾ ಫೌಂಡೇಷನ್ ಇಶಾ ಯೋಗ ಸೆಂಟರ್ ನಲ್ಲಿ ಕಾಂತಾರ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿತ್ತು.ಈ ಪ್ರದರ್ಶನವನ್ನು ಏಕಕಾಲಕ್ಕೆ 3000 ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಇದು ಹೊಸ ದಾಖಲೆಯಾಗಿದೆ. ಕನ್ನಡದ ಮಟ್ಟಿಗೆ ಏಕಕಾಲಕ್ಕೆ ಒಂದು ಸಿನಿಮಾವನ್ನು ಇಷ್ಟು ಮಂದಿ ವೀಕ್ಷಿಸಿರುವುದು ದಾಖಲೆಯಾಗಿದೆ.-Edited by Rajesh Patil