ಬೆಂಗಳೂರು: ಬಹಳ ದಿನಗಳ ನಂತರ ರಾಧಿಕಾ ಪಂಡಿತ್ ಅಭಿನಯದ ಆದಿಲಕ್ಷ್ಮಿ ಪುರಾಣ ಸಿನಿಮಾ ಮತ್ತು ಚಿರು ಸರ್ಜಾ ಅಭಿನಯದ ಸಿಂಗ ನಿನ್ನೆ ಒಂದೇ ದಿನಕ್ಕೆ ಬಿಡುಗಡೆಯಾಗಿ ಪ್ರೇಕ್ಷಕರು ವೀಕ್ಷಿಸಿ ತಮ್ಮ ಅಭಿಪ್ರಾಯ ಹೇಳಿಯಾಗಿದೆ.ಆದಿಲಕ್ಷ್ಮಿ ಪುರಾಣ ಸಿನಿಮಾ ನೋಡಿ ಬಂದ ಪ್ರೇಕ್ಷಕರು ರಾಧಿಕಾರನ್ನು ಬಹಳ ದಿನಗಳ ನಂತರ ತೆರೆ ಮೇಲೆ ನೋಡಿ ಖುಷಿಪಟ್ಟಿದ್ದಾರೆ. ಹಳೇ ಕತೆಯಾದರೂ, ಹೊಸದಾಗಿ ತೋರಿಸಲಾಗಿದೆ. ರಾಧಿಕಾ ಬಬ್ಲಿ ಕ್ಯಾರೆಕ್ಟರ್, ನಿರೂಪ್ ಗೆ ಒಪ್ಪುವ ಪಾತ್ರ ಇದು ಎಂದು