ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಆದಿಪುರುಷ್ ಸಿನಿಮಾದಲ್ಲಿನ ಕೆಲವು ಆಕ್ಷೇಪಾರ್ಹ ಸಂಭಾಷಣೆಗಳು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು.ಚಿತ್ರದಲ್ಲಿ ಬಳಸಲಾದ ವಿಎಫ್ ಎಕ್ಸ್, ಗ್ರಾಫಿಕ್ಸ್ ಬಗ್ಗೆ ಟ್ರೋಲ್ ಗಳು ಒಂದೆಡೆಯಾದರೆ ಕೆಲವು ವಿವಾದಿತ ಸಂಭಾಷಣೆಗಳು ಆಕ್ಷೇಪಕ್ಕೆ ಗುರಿಯಾಗಿದ್ದವು. ಈ ಬಗ್ಗೆ ಕೆಲವು ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಇದರ ಬೆನ್ನಲ್ಲೇ ಚಿತ್ರತಂಡ ವಿವಾದಿತ ಸಂಭಾಷಣೆಗಳಿಗೆ ಕತ್ತರಿ ಹಾಕಲು ತೀರ್ಮಾನಿಸಿದೆ.‘ನಾನು ಈ ಸಿನಿಮಾದಲ್ಲಿ ಪ್ರಭು ಶ್ರೀರಾಮ, ಸೀತಾಮಾತೆಯನ್ನು ಆರಾಧಿಸುವ ಎಷ್ಟೋ ಸಾಲುಗಳನ್ನು ಬರೆದಿದ್ದೇನೆ. ಅದು ಯಾರಿಗೂ