ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಇದೀಗ ನಮ್ಮೊಂದಿಗಿಲ್ಲ. ಹಾಗಿದ್ದರೂ ಅವರನ್ನು ಸಿನಿಮಾಗಳಲ್ಲಿ ತೋರಿಸುವ ಕೆಲಸ ಮಾತ್ರ ಇನ್ನೂ ಮುಂದುವರಿದಿದೆ. ಇತ್ತೀಚೆಗೆ ತೆರೆ ಕಂಡಿದ್ದ ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಬಳಸಿ ಪ್ರೇಕ್ಷಕರಿಗೆ ತೋರಿಸಲಾಗಿತ್ತು. ಇದೀಗ ಮತ್ತೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ಕರೆತರಲಾಗುತ್ತಿದೆ.ಅದೂ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಚಿತ್ರ ಆಪ್ತಮಿತ್ರ ಎರಡನೇ ಭಾಗದ ಮೂಲಕ. ಮೊದಲ ಭಾಗ ಮಾಡಿದ್ದ ನಿರ್ದೇಶಕರೇ ಎರಡನೇ ಭಾಗವನ್ನೂ ಮಾಡಲಿದ್ದಾರೆ ಎಂಬುದು