ಬೆಂಗಳೂರು: ಸಾಹಸಸಿಂಹ ವಿಷ್ಣುವರ್ದನ್ ನಾಯಕರಾಗಿದ್ದ ಆಪ್ತಮಿತ್ರ ಸಿನಿಮಾ ಹಲವು ದಾಖಲೆಗಳನ್ನು ಮುರಿದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.ಈ ಸಿನಿಮಾ ಬಿಡುಗಡೆಯಾಗಿ 18 ವರ್ಷವಾಗಿದೆ. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಆಪ್ತಮಿತ್ರ ಸಿನಿಮಾದ ಕೆಲವು ಫೋಟೋಗಳನ್ನು ಹಂಚಿಕೊಂಡು ಸಿನಿಮಾದ ಗೋಲ್ಡನ್ ಗಳಿಗೆಯನ್ನು ಸ್ಮರಿಸಿಕೊಂಡಿದ್ದಾರೆ.ವಿಷ್ಣುವರ್ಧನ್ ಜೊತೆಗೆ ಪ್ರೇಮಾ, ಸೌಂದರ್ಯ, ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ದುರಂತವೆಂದರೆ ಇದು ಸೌಂದರ್ಯಾ ಅವರ ಕೊನೆಯ ಸಿನಿಮಾವಾಗಿತ್ತು. ಈ ಸಿನಿಮಾದ ಹಾಡುಗಳು