WDಬೆಂಗಳೂರು: ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕಾಂತಾರ ಸಿನಿಮಾ ನೋಡಲು ಪಟ್ಟ ಪಾಡು ವಿವರಿಸಿದ್ದು, ಸಿನಿಮಾವನ್ನು ಕೊಂಡಾಡಿದ್ದಾರೆ.ಕಾಂತಾರ ಸಿನಿಮಾ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿದ್ದು, ಮೂರನೇ ವಾರವೂ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ಸ್ಯಾಂಡಲ್ ವುಡ್ ಮಾತ್ರವಲ್ಲ, ಪರಭಾಷೆಯ ಸೆಲೆಬ್ರಿಟಿಗಳೂ ಮೆಚ್ಚಿಕೊಂಡಿದ್ದಾರೆ.ಸಾಮಾನ್ಯ ಜನರಿಗೆ ಟಿಕೆಟ್ ಸಿಗದೇ ಇರುವುದು ಸಾಮಾನ್ಯ. ಆದರೆ ತಮಗೂ ಟಿಕೆಟ್ ಸಿಕ್ಕಿರಲಿಲ್ಲ ಎಂದು ಅಭಿಷೇಕ್ ಹೇಳಿದ್ದಾರೆ. ಈ ಸಿನಿಮಾವನ್ನು ಥಿಯೇಟರ್ ನಲ್ಲೇ ನೋಡಬೇಕು