WDಬೆಂಗಳೂರು: ಜ್ಯೂ. ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ಇಂದು ಜನ್ಮದಿನದ ಸಂಭ್ರಮ. ಅವರಲ್ಲೇ ಅಭಿಮಾನಿಗಳು ರೆಬಲ್ ಸ್ಟಾರ್ ಅಂಬರೀಶ್ ರನ್ನು ಕಾಣುತ್ತಾರೆ.ಇದಕ್ಕೆ ಕಾರಣ, ಅಭಿ ಮಾತು, ಮ್ಯಾನರಿಸಂ, ನಗು, ನೋಡಲು ಥೇಟ್ ಅಪ್ಪನನ್ನೇ ಹೋಲುತ್ತಾರೆ. ಪಕ್ಕಾ ಮಂಡ್ಯದ ಸ್ಟೈಲ್ ನಲ್ಲೇ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ.ಇಂತಿಪ್ಪ ಅಭಿಗೆ ಈಗ 29 ವರ್ಷವಾಗಿದೆಯಷ್ಟೇ. 1993 ರಲ್ಲಿ ಜನಿಸಿದ ಅಭಿಷೇಕ್ ಇದೀಗ ಸ್ಯಾಂಡಲ್ ವುಡ್ ನ ಯುವ ಭರವಸೆಯ ನಟರ ಸಾಲಿನಲ್ಲಿ ಒಬ್ಬರಾಗಿದ್ದಾರೆ.