ಬೆಂಗಳೂರು: ಅಂಬರೀಶ್ ತೀರಿಕೊಂಡು 15 ದಿನಗಳಾಗಿವೆಯಷ್ಟೇ. ಅಪ್ಪ ತೀರಿಕೊಂಡ ದುಃಖ ಮನಸ್ಸಲ್ಲಿರುವಾಗಲೇ ಪುತ್ರ ಅಭಿಷೇಕ್ ತಮ್ಮ ಕರ್ತವ್ಯ ನಿಭಾಯಿಸಲು ಹಾಜರಾಗಿದ್ದಾರೆ.ತಮ್ಮ ಚೊಚ್ಚಲ ಅಭಿನಯದ ಅಮರ್ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಬಾಕಿಯಿದ್ದು, ಅಂಬರೀಶ್ ತೀರಿಕೊಂಡಿದ್ದರಿಂದ ಕೆಲವು ದಿನ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಚಿತ್ರತಂಡಕ್ಕೆ ತಮ್ಮಿಂದ ತೊಂದರೆಯಾಗುವುದು ಬೇಡವೆಂದು ಅಭಿ ದುಃಖ ಮರೆತು ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಅಪ್ಪನ ಫೋಟೋ ಹಿಡಿದು ಶೂಟಿಂಗ್ ಗೆ ಹೊರಟ ಅಭಿ ಫೈಟಿಂಗ್ ದೃಶ್ಯದ ಚಿತ್ರೀಕರಣದಲ್ಲಿ