ಮಲಹೊರುವ ಮಲಬಾಚುವ ಪದ್ಧತಿ ಅಮಾನವೀಯ. ದಲಿತರನ್ನು ಗುಲಾಮರನ್ನಾಗಿಸುವ ಕುತಂತ್ರ. ಸರಕಾರ ಪ್ರಾಯೋಜಿತ ಜೀತಪದ್ದತಿ. ನಾಗರೀಕ ಸಮಾಜದ ಸಾಕ್ಷೀ ಪ್ರಜ್ಞೆಗೆ ಹಿಡಿದ ಕೈಗನ್ನಡಿ. ಇಡೀ ಸಮಾಜ ತಲೆತಗ್ಗಿಸುವ, ನಾಚಿಕೆ ಪಡಬೇಕಾದ ದುರಂತದ ಸಂಗತಿ. ಮನುಷ್ಯನ ಘನತೆಗೆ ಧಕ್ಕೆ ತರುವ ಸಂವಿಧಾನಬಾಹಿರ ಕೃತ್ಯ, ಘೋರ ಮಾನವ ಹಕ್ಕುಗಳ ಉಲ್ಲಂಘನೆ. ಮಲಬಾಚುವ ಪದ್ದತಿ ಕಾನೂನುಬಾಹಿರ ಎಂದು ಕಾನೂನು ಮಾಡಿದೆ ಆದರೆ ಅದು ಆಚರಣೆಗೆ ಬಾರದಂತೆ ಸಹ ನೋಡಿಕೊಳ್ಳುತ್ತಿದೆ. ಇವತ್ತಿಗೂ ದೇಶದಲ್ಲಿ ಪ್ರತಿನಿತ್ಯ ಪೌರಕಾರ್ಮಿಕರು