ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದರೂ ಹೊಸ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ ನಾಳೆಯಿಂದ ಹೊಸ ಸಿನಿಮಾಗಳ ರಿಲೀಸ್ ಶುರುವಾಗಲಿದ್ದು, ಗಾಂಧಿನಗರ ಮತ್ತೆ ಕಲರವ ಮಾಡಲಿದೆ. ನಾಳೆ ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಕ್ಟ್ 1978’ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಹಿಟ್ ಆಗಿದ್ದು, ಸಿನಿಮಾ ಕೂಡಾ ಒಳ್ಳೆಯ ಪ್ರದರ್ಶನ ಕಾಣುವ ವಿಶ್ವಾಸವಿದೆ. ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡುವ ಹೆಣ್ಣಿನ ಕತೆ ಸಿನಿಮಾದಲ್ಲಿದೆ.