ಲವ್ ಯು ರಚ್ಚು ಚಿತ್ರೀಕರಣದ ವೇಳೆ ಸಂಭವಿಸಿದ ದುರಂತ ಪ್ರಕರಣದಲ್ಲಿ ನಟ ಅಜಯ್ ರಾವ್, ನಿರ್ದೇಶಕ ಶಂಕರ್ ಸೇರಿದಂತೆ ನಾಲ್ವರಿಗೆ ನ್ಯಾಯಾಲಯ ಜಾಮೀ ನು ಮಂಜೂರು ಮಾಡಿದೆ. ರಾಮನಗರದ 3ನೇ ಅಪಾರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ನಾಲ್ವರಿಗೆ ಜಾಮೀನು ಮಂಜೂರು ಮಾಡಿರು. ಚಿತ್ರದ ನಿರ್ದೇಶಕ ಶಂಕರ್, ಕ್ರೇನ್ ಚಾಲಕ ಮಹದೇವ್, ಫೈಟ್ ಮಾಸ್ಟರ್ ವಿನೋದ್ ಕುಮಾರ್ ಹಾಗೂ ನಟ ಅಜಯ್ ರಾವ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.