ಮಂಗಳಮುಖಿಯರ ಪರ ಧ್ವನಿ ಎತ್ತಿದ ನಟ ಅನಿರುದ್ಧ್

ಬೆಂಗಳೂರು| Krishnaveni K| Last Modified ಸೋಮವಾರ, 22 ಫೆಬ್ರವರಿ 2021 (10:08 IST)
ಬೆಂಗಳೂರು: ಸ್ವಚ್ಛತೆಯ ಕುರಿತಾಗಿ ಅಭಿಯಾನ ಆರಂಭಿಸಿ ಯಶಸ್ಸು ಕಂಡಿರುವ ಖ್ಯಾತ ನಟ ಅನಿರುದ್ಧ್, ಇದೀಗ ಮಂಗಳ ಮುಖಿಯರ ಪರ ಮಾತನಾಡಿದ್ದಾರೆ.

 
ಮಂಗಳಮುಖಿಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ನಟ ಅನಿರುದ್ಧ್ ಸರ್ಕಾರ ಮತ್ತು ಉದ್ಯಮಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ಅನಿರುದ್ಧ್ ಮನವಿ ಮಾಡಿದ್ದಾರೆ.
 
ಈಗಾಗಲೇ ಅವರ ಸ್ವಚ್ಛತೆ ಅಭಿಯಾನಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸಿ ಹಲವೆಡೆ ಅಸ್ವಚ್ಛ ಪ್ರದೇಶಗಳನ್ನು ಸ್ವಚ್ಛಗೊಳಿಸಿದ್ದಾರೆ. ಇದೀಗ ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ, ಅವಕಾಶ ವಂಚಿತ ಮಂಗಳಮುಖಿಯರಿಗೆ ಜೀವನ ಕಲ್ಪಿಸಿಕೊಡಲು ಮನವಿ ಮಾಡಿದ್ದಾರೆ. ಅವರ ಈ ಮನವಿಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :