ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನಟ ಅನಿರುದ್ಧ್ ಪ್ರಧಾನಿ ಮೋದಿಗೆ ಈಮೇಲ್ ಮುಖೇನ ಮನವಿ ಪತ್ರವೊಂದನ್ನು ರವಾನಿಸಿದ್ದಾರೆ.ಎಲ್ಲರಿಗೂ ಗೊತ್ತಿರುವ ಹಾಗೆ ಅನಿರುದ್ಧ್ ನಟನಾಗಿ ಮಾತ್ರವಲ್ಲದೆ, ಬಿಡುವಿದ್ದಾಗಲೆಲ್ಲಾ ಪತ್ರಿಕೆಗಳಿಗೆ ಕಾಲಂ ಬರೆಯುತ್ತಿರುತ್ತಾರೆ. ಸಿನಿಮಾ ಹೊರತಾಗಿಯೂ ಕೆಲವು ಗಂಭೀರ ವಿಚಾರಗಳ ಬಗ್ಗೆ ಅನಿರುದ್ಧ್ ಬರೆಯುತ್ತಾರೆ. ಇತ್ತೀಚೆಗೆ ಅವರು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಆಝಾದ್ ಹಿಂದ್ ಪೌಜ್ ನಲ್ಲಿ ಸೇವೆ ಸಲ್ಲಿಸಿದ್ದ ವ್ಯಕ್ತಿಯೊಬ್ಬರ ಬಗ್ಗೆ