ಬೆಂಗಳೂರು: ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ನಿಧನರಾದ ಪ್ರತಿಭಾವಂತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಬಗ್ಗೆ ನಟ ಅನಿರುದ್ಧ್ ಮಾತನಾಡಿದ್ದಾರೆ.ವಿಜಯ್ ಅಕಾಲಿಕ ಸಾವಿಗೆ ದುಃಖ ವ್ಯಕ್ತಪಡಿಸಿರುವ ಅನಿರುದ್ಧ್ ದ್ವಿಚಕ್ರ ವಾಹನ ಬಳಸುವಾಗ ಹೆಲ್ಮೆಟ್ ಬಳಸುವುದನ್ನು ಮರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಸಂಚಾರಿ ವಿಜಯ್ ಪ್ರತಿಭಾವಂತರಾದರೂ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಕ್ಕಾಗಿ ಪರದಾಡಿದ್ದರ ಬಗ್ಗೆ ಮಾತನಾಡಿದ್ದಾರೆ.ನಾನೂ ಕೂಡಾ ಚಿತ್ರರಂಗದಲ್ಲಿ ಇಂತಹ ಅವಮಾನ ಎದುರಿಸಿದ್ದೇನೆ. ನಿಮ್ಮಲ್ಲಿ ಪ್ರತಿಭೆಯಿದೆ, ಆದರೆ ಮಾರುಕಟ್ಟೆಯಲ್ಲಿ