ಬೆಂಗಳೂರು: ಕಿರುತೆರೆಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ಮರುಹುಟ್ಟು ಪಡೆದಿರುವ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಚಿತ್ರದುರ್ಗ ಜಿಲ್ಲೆಯ ರೈತ ಮಹಿಳೆಯೊಬ್ಬಳ ಕಷ್ಟಕ್ಕೆ ಕರಗಿ ನೆರವಿಗೆ ನಿಂತಿದ್ದಾರೆ.ಈರುಳ್ಳಿ ಬೆಳೆದ ರೈತನೊಬ್ಬನ ಮಡದಿ ಸರ್ಕಾರಕ್ಕೆ ತಮ್ಮ ಬೆಳೆಗೆ ತಕ್ಕ ಮಾರುಕಟ್ಟೆ ಒದಗಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಮಾಡಿದ್ದು ಫೇಸ್ ಬುಕ್ ನಲ್ಲಿ ವೈರಲ್ ಆಗಿತ್ತು.ಈ ಮಹಿಳೆಯ ಕಷ್ಟಕ್ಕೆ ಮರುಗಿದ ನಟ ಅನಿರುದ್ಧ್ ಸಚಿವರಾದ ಬಿಸಿ ಪಾಟೀಲ್, ಬೆಂಗಳೂರು ದಕ್ಷಿಣ ಸಂಸದ