ಬೆಂಗಳೂರು: ಬಹುಬಾಷಾ ನಟಿ, ಮಲಯಾಳಂ ಬೆಡಗಿ ಭಾವನಾ ಮೆನನ್ ಅವರ ಮದುವೆ ದಿನ ಫಿಕ್ಸ್ ಆಗಿದ್ದು, ಶೀಘ್ರವೇ ಹಸೆಮಣೆ ಏರಲಿದ್ದಾರಂತೆ. ಇವರು ಕನ್ನಡ ಚಿತ್ರ ನಿರ್ಮಾಪಕ ನವೀನ್ ಅವರನ್ನು ವಿವಾಹವಾಗಲ್ಲಿದ್ದಾರೆ. ಕಳೆದ ಮಾರ್ಚ್ 9 ರಂದು ಕೊಚ್ಚಿಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ತಿಂಗಳು 22 ರಂದು ಕೇರಳದ ತ್ರಿಶೂರ್ ನಲ್ಲಿ ವಿವಾಹವಾಗಲಿದ್ದಾರೆ. ಸಂಬಂಧಿಕರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾವನಾ ಅವರ ತಾಯಿ ಹೇಳಿದ್ದಾರೆ.