ಬೆಂಗಳೂರು: ಕಿರುತೆರೆಯ ಖ್ಯಾತ ಜೋಡಿ ನಟ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಇತ್ತೀಚೆಗಷ್ಟೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈಗ ಮದುವೆಗೆ ಕೊರೋನಾ ಅಡ್ಡಿಯಾಗಿದೆ. ಹೀಗಾಗಿ ಚಂದನ್ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮದುವೆ ಹೇಗಿರಬೇಕು ಎಂದು ಅಭಿಮಾನಿಗಳ ಸಲಹೆ ಕೇಳಿದ್ದಾರೆ.ನಮ್ಮ ಮದುವೆ ನಮ್ಮಿಬ್ಬರ ಕುಟುಂಬದ ನಡುವೆ ಮಾತ್ರವಿರಬೇಕೇ ಅಥವಾ ಎಲ್ಲರ ಸಮ್ಮುಖದಲ್ಲಿ ನಡೆಯಬೇಕೇ? ಎಂದು ಚಂದನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಬಹುಪಾಲು ಜನರು ನಿಮ್ಮಿಬ್ಬರ ಕುಟುಂಬದ ನಡುವೆ ನಡೆಯಲಿ