ಬೆಂಗಳೂರು: ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಖ್ಯಾತಿಯ ನಟ ಚಂದ್ರಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಕೆನಡಾದಲ್ಲಿ ನೆಲೆಸಿರುವ ಚಂದ್ರಶೇಖರ್ ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಹೃದಯಾಘಾತವಾಗಿತ್ತೆಂದು ಕುಟುಂಬದ ಮೂಲಗಳು ತಿಳಿಸಿವೆ. ಪತ್ನಿ ಶೀಲಾ, ಪುತ್ರಿ ತಾನ್ಯಾರನ್ನು ಚಂದ್ರಶೇಖರ್ ಅಗಲಿದ್ದಾರೆ.ವಿಷ್ಣುವರ್ಧನ್, ರಾಜ್ ಕುಮಾರ್ ಸೇರಿದಂತೆ ಹಲವು ಹಿರಿಯ ನಟರ ಜತೆ ಚಂದ್ರಶೇಖರ್ ಅಭಿನಯಿಸಿದ್ದರು. ಎಡಕಲ್ಲು ಗುಡ್ಡದ ಮೇಲೆ ಅಲ್ಲದೆ, ಸಂಪತ್ತಿಗೆ ಸವಾಲು, ಗುರು ಶಿಷ್ಯರು ಸೇರಿದಂತೆ