ಉದ್ಯಮಿ ಪುತ್ರ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮಗ ಪ್ರಣಾಮ್ ದೇವರಾಜ್`ಗೆ ಪೊಲೀಸರಿಂದ ನೋಟಿಸ್ ಬಂದಿರುವುದು ನಿಜ ಎಂದು ಹಿರಿಯ ನಟ ದೇವರಾಜ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ನಟ ದೇವರಾಜ್, ಅಪಘಾತದ ಸಂದರ್ಭ ಅಲ್ಲಿದ್ದ ಬಗ್ಗೆ ವಿವರಣೆ ಕೇಳಿ ಪೊಲೀಸರು ನೋಟಿಸ್ ನೀಡಿದ್ದಾರೆ. ಅಪಘಾತ ನಡೆದ ಸಂದರ್ಭ ನನ್ನ ಮಗ ಅಲ್ಲಿರಲಿಲ್ಲ. ಅಪಘಾತದ ಸುದ್ದಿ ಕೇಳಿ ಅಲ್ಲಿಗೆ ಬಂದಿದ್ದರು.