ಬೆಂಗಳೂರು : ಹೆಚ್ಚಾಗಿ ಸೆಲೆಬ್ರಿಟಿಗಳು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದರ ಮೂಲಕ ಸಂಭ್ರಮಪಡುತ್ತಾರೆ. ಆದರೆ ಸ್ಯಾಂಡಲ್ ವುಡ್ ನಟ ಧನಂಜಯ್ ಮಾತ್ರ ತಮ್ಮ ಹುಟ್ಟುಹಬ್ಬ ದಿನದಂದು ಒಂದೊಳ್ಳೆ ಕೆಲಸ ಮಾಡುವುದರ ಮೂಲಕ ಸಂಭ್ರಮಗೊಂಡಿದ್ದಾರೆ. ಹೌದು ಇಂದು ನಟ ಡಾಲಿ ಧನಂಜಯ್ ಅವರ ಜನ್ಮದಿನ. ಆದರೆ ಕೊಡಗು ನಲ್ಲಿ ನಡೆದ ಅನಾಹುತ ಕಂಡು ನೊಂದ ನಟ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದೆಂದು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳಿಗೆ ಬೇಸರಮಾಡಬಾರದು ಎಂಬ ಕಾರಣಕ್ಕೆ ಅವರನ್ನು ಭೇಟಿ