ಚೆನ್ನೈ : ಬಾಲಾಜಿ ಮೋಹನ್ ನಿರ್ದೇಶನದ ಮತ್ತು ನಟ ಧನುಷ್ ಅಭಿನಯದ ಮಾರಿ 2 ಚಿತ್ರ 2018ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಚಿತ್ರದ ವಿಚಾರಕ್ಕೆ ನಟ ಧನುಷ್ ಟ್ವೀಟರ್ ಗೆ ಧನ್ಯವಾದ ತಿಳಿಸಿದ್ದಾರೆ. ಹೌದು. ನಟ ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ಮಾರಿ 2 ಚಿತ್ರ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರೂ ಕೂಡ ಸಂಗ್ರಹದಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಆದರೆ ಈ ಚಿತ್ರದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿದ್ದವು.