ಬೆಂಗಳೂರು : ರಾಜಾಹುಲಿ ಚಿತ್ರದಲ್ಲಿ ಯಶ್ ಕುಚುಕು ಗೆಳೆಯನಾಗಿ ನಟಿಸಿದ ನಟ ಹರ್ಷವರ್ಧನ್ ಅವರು ಸೋಮವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಹರ್ಷವರ್ಧನ್ ಅವರು ಇದೇ ವರ್ಷ ಮೇ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಮಾಡೆಲ್ ಐಶ್ವರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಡಿ. 3 ರಂದು ನಟ ಹರ್ಷವರ್ಧನ್ ಹಾಗೂ ಮಾಡೆಲ್ ಐಶ್ವರ್ಯ ತಿರುಪತಿಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಇದೇ ತಿಂಗಳ 8ರಂದು ಬೆಂಗಳೂರಿನಲ್ಲಿ ಆರತಕ್ಷತೆ