ಬೆಂಗಳೂರು: ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಭಾರೀ ಒತ್ತಾಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಟ ಜಗ್ಗೇಶ್ ಕೂಡಾ ಧ್ವನಿಗೂಡಿಸಿದ್ದಾರೆ. ತುಳು ನಾಡ ಸಹೋದರರು ಎಷ್ಟೇ ಬೆಳೆದರೂ ಯಾವುದೇ ದೇಶದಲ್ಲಿದ್ದರೂ ತಮ್ಮ ಮಾತೃಭಾಷೆ ಬಳಸುತ್ತಾರೆ. ಅದಕ್ಕೇ ತುಳು ಭಾಷೆ ಬೆಳೆದಿರೋದು. 8 ನೇ ಪರಿಚ್ಛೇದಕ್ಕೆ ಸೇರಲಿ ಸನಾತನ ಭಾಷೆ ಎಂದೇ ನನ್ನ ಹಾರೈಕೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.ಈ ಹಿಂದೆ ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳ