ಕರ್ನಾಟಕದಲ್ಲಿ ಬಾಹುಬಲಿ- 2 ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು, ಈ ಬಗ್ಗೆ ಪ್ರಸ್ತಾಪಿಸಿ ಕನ್ನಡಿಗರಿಗೆ ಸ್ವಾಭಿಮಾನವಿಲ್ಲ ಎಂಬ ಹೇಳಿಕೆ ನೀಡಿದ್ದ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಕಮೆಂಟ್ಗೆ ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಜಗ್ಗೇಶ್, ಯಾವಾಗ ನಮ್ಮ ಮನೆಯವರ ಬಗ್ಗೆ ನಮಗೆ ಅಭಿಮಾನವಿಲ್ಲಾ! ಯಾವಾಗ ನಮ್ಮ ಮನೆಗೆ ಬೇಲಿಯಿಲ್ಲಾ! ಆಗ ದಾರಿಯಲ್ಲಿನ ಬಿಡಾಡಿ ನಾಯಿಗಳು ನಮ್ಮ ಜಾಗಕ್ಕೆ ಪ್ರವೇಶ ಮಾಡಿ ನಮ್ಮ ನೋಡಿ ಬೊಗಳುತ್ತೆ!