ಬೆಂಗಳೂರು: ನವರಸನಾಯಕ ಜಗ್ಗೇಶ್ ಕನ್ನಡ ಭಾಷೆ ಮೇಲಿರುವ ಪ್ರೇಮ ಎಷ್ಟು ಎಂಬುದು ಅವರ ಟ್ವಿಟರ್ ನೋಡಿದರೇ ಗೊತ್ತಾಗುತ್ತದೆ. ಇಂತಿಪ್ಪ ಜಗ್ಗೇಶ್ ಪರಭಾಷಾ ನಟಿ ಶ್ರುತಿ ಹಾಸನ್ ಕನ್ನಡಕ್ಕೆ ಬರಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿರುವುದನ್ನು ನೋಡಿ ಸಿಟ್ಟು ಬರದೇ ಇದ್ದಿತೇ? ಶ್ರುತಿ ಹಾಸನ್ ಕನ್ನಡ ಸಿನಿಮಾವೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿತ್ತು. ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಶ್ರುತಿ ಸದ್ಯಕ್ಕೆ ಕನ್ನಡ ಚಿತ್ರದಲ್ಲಿ ನಟಿಸುವ ಯಾವ ಯೋಚನೆಯೂ ನನಗಿಲ್ಲ.