ಬೆಂಗಳೂರು: ಗೀತಾ ವಿಷ್ಣು ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಹೆಸರು ಎಳೆದು ತಂದಿದ್ದಕ್ಕೆ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಜ್ವಲ್ ಮತ್ತು ಸ್ನೇಹಿತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾರೋ ಸಿರಿವಂತರ ಮಗ ಮಾಡಿದ ತಪ್ಪಿಗೆ ಇನ್ನೂ ಬೆಳೆಯಬೇಕಿರುವ ಮಕ್ಕಳ ಹೆಸರು ಹಾಳು ಮಾಡಬೇಡಿ ಎಂದು ಜಗ್ಗೇಶ್ ಪ್ರಜ್ವಲ್, ದಿಗಂತ್ ಪರವಾಗಿ ಮಾತನಾಡಿದ್ದಾರೆ.ಅಷ್ಟೇ ಅಲ್ಲದೆ, ಆ ದಿನ ಪ್ರಜ್ವಲ್ ಚಿತ್ರೀಕರಣದಲ್ಲಿದ್ದ ಫೋಟೋವನ್ನೂ ಸಾಕ್ಷಿ ಸಮೇತ