ಬೆಂಗಳೂರು: ನವರಸನಾಯಕ ಜಗ್ಗೇಶ್ ಇದೀಗ ಹೊಸದೊಂದು ಇಮೇಜ್ ಕೊಡುವ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮುಂಬರುವ ಚಿತ್ರಕ್ಕಾಗಿ ಜಗ್ಗೇಶ್ ಹೊಸದೊಂದು ಸಾಹಸ ಮಾಡಿದ್ದಾರೆ. ಜಗ್ಗೇಶ್ ಗನ್ ಹಿಡಿದುಕೊಂಡು ಪಕ್ಕಾ ಮಾಸ್ ಶೈಲಿಯಲ್ಲಿ ನಿಂತಿರುವ 8ಎಂಎಂ ಸಿನಿಮಾ ಪೋಸ್ಟರ್ ಗಳು ಈಗಾಗಲೇ ಕುತೂಹಲ ಹುಟ್ಟಿಸಿವೆ. ಇದೀಗ ಜಗ್ಗೇಶ್ ಈ ಸಿನಿಮಾದ ಹಾಡೊಂದಕ್ಕೆ ಸಾಹಿತ್ಯವನ್ನೂ ಬರೆದಿದ್ದಾರಂತೆ.ಬದುಕು ಒಂದು ಯುದ್ಧ ಭೂಮಿ ಎಂದು ಆರಂಭವಾಗುವ ಸಾಲನ್ನು ಜಗ್ಗೇಶ್ ಬರೆದಿದ್ದಾರೆ. ಇಷ್ಟು