ಬೆಂಗಳೂರು: ಹಲವಾರು ತಿಂಗಳಿನಿಂದ ವೇತನವೂ ಇಲ್ಲದೇ ಕೊರೋನಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯರ ಪರವಾಗಿ ನಟ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಧ್ವನಿಯೆತ್ತಿದ್ದಾರೆ.ಇಂತಹ ಸಂಕಟದ ಸಮಯದಲ್ಲೂ ಕಠಿಣ ಪರಿಶ್ರಮ ಪಡುತ್ತಿರುವ ವೈದ್ಯರಿಗೆ ಕಳೆದ 16 ತಿಂಗಳಿನಿಂದ ವೇತನವನ್ನೇ ನೀಡಿಲ್ಲ ಎಂಬ ಸಂಗತಿ ನಿಜಕ್ಕೂ ದುರದೃಷ್ಟಕರ. ಇದರ ಹೊರತಾಗಿಯೂ ಪರಸ್ಪರ ಕೆಸರೆರಚಾಟ ನಡೆಯುತ್ತಿದೆಯೇ ಹೊರತು ಪರಿಹಾರ ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸ. ಆದರೆ ಕೊರೋನಾ ವಿರುದ್ಧ ಹೋರಾಡುತ್ತಿರುವ ಈ ಯೋಧರಿಗೆ ವೇತನೇ ಸಿಗುತ್ತಿಲ್ಲ