ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಂಪನಿ ಎಂಬ ಕಾಮಿಡಿ ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾಡುತ್ತಿರುವ ಟೀಕೆಗಳಿಗೆ ನಟ ಜೆಕೆ ತಕ್ಕ ಉತ್ತರ ಕೊಟ್ಟಿದ್ದಾರೆ.ಕಾರ್ಯಕ್ರಮದಲ್ಲಿ ನಿವೇದಿತಾ ಗೌಡರನ್ನು ಜಡ್ಜ್ ಸ್ಥಾನದಲ್ಲಿ ಕೂರಿಸಿದ್ದು, ಜೆಕೆ ಮತ್ತು ಕೃಷಿ ತಾಪಂಡ ಅವರ ವರ್ತನೆ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಕೆಲವರು ಹಿಗ್ಗಾ ಮುಗ್ಗಾ ಟೀಕೆ ಮಾಡಿದ್ದರು. ಇವರಿಗೆ ಅಲ್ಲಿಯೇ ಜೆಕೆ ತಕ್ಕ ಉತ್ತರ ಕೊಟ್ಟಿದ್ದಾರೆ.ನಿವೇದಿತಾರಂತಹ ಅನುಭವವಿಲ್ಲದವರನ್ನು ಜಡ್ಜ್ ಸ್ಥಾನದಲ್ಲಿ ಕೂರಿಸುವ