ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸಿರುವ ಹಿನ್ನಲೆಯಲ್ಲಿ ಸಿನಿಮಾ ತಾರೆಯರು ಖಡ್ಡಾಯವಾಗಿ ಮತ ಚಲಾಯಿಸುವಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದು, ಅದೇರೀತಿ ಇದೀಗ ನಟ ಕಿಶೋರ್ ಅವರು ಕೂಡ ತಮ್ಮ ಅಭಿಮಾನಿಗಳಲ್ಲಿ ಪ್ರಾಮಾಣಿಕವಾಗಿ ಪ್ರಾಮಾಣಿಕರಿಗೆ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ. ದುಡ್ಡಿಗಾಗಿ ಮತ್ತು ಇತರ ಆಮಿಷಗಳಿಗೆ ಮತದಾನ ಮಾಡುವುದನ್ನು ನಮ್ಮ ಜನ ಕಡಿಮೆ ಮಾಡಬೇಕು. ಇನ್ನು ತಮ್ಮ ಏರಿಯಾಗಳಲ್ಲಿ ನಡೆಯುವ ಕೆಲ ಕಾರ್ಯಕ್ರಮಗಳಿಗೆ ಅನವಶ್ಯಕವಾಗಿ ನಾವು ರಾಜಕಾರಣಿಗಳನ್ನು ಬಳಸಿಕೊಳ್ಳುತ್ತೇವೆ.