ಬೆಂಗಳೂರು: ವರ್ಷದ ಕೊನೆಯ ದಿನ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು ಹಿರಿಯ ನಟ ಲೋಕನಾಥ್ ನಿಧನದ ಸುದ್ದಿ ಕೇಳಿಬಂದಿದೆ.ಈ ವರ್ಷ ಹಲವು ಕಲಾವಿದರನ್ನು ಕಳೆದುಕೊಂಡು ದುಃಖದಲ್ಲಿದ್ದ ಚಿತ್ರರಂಗಕ್ಕೆ ಲೋಕನಾಥ್ ಮೂಲಕ ಮತ್ತೊಂದು ಶಾಕ್ ಎದುರಾಗಿದೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.ಸಂಸ್ಕಾರ ಅವರ ಮೊದಲ ಚಲನಚಿತ್ರವಾಗಿತ್ತು. ಬಳಿಕ ನಾಗರಹಾವು, ಭೂತಯ್ಯನ ಮಗ ಅಯ್ಯು, ಮಿಂಚಿನ ಓಟ ಸೇರಿದಂತೆ ಹಲವು ಚಿತ್ರಗಳಲ್ಲಿ