Widgets Magazine

ಸದ್ದಿಲ್ಲದೇ ಮೂರನೇ ಮದುವೆಯಾದ ನಟ ಪ್ರಭುದೇವ್. ಹುಡುಗಿ ಯಾರು ಗೊತ್ತಾ?

ಚೆನ್ನೈ| pavithra| Last Modified ಭಾನುವಾರ, 22 ನವೆಂಬರ್ 2020 (09:20 IST)
ಚೆನ್ನೈ : ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವ್ ಅವರು ಕಳೆದ ಕೆಲವು ದಿನಗಳಿಂದ ಮದುವೆ ವಿಚಾರದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.

ಹೌದು. ಇತ್ತೀಚೆಗೆ ಈಗಾಗಲೇ 2 ಬಾರಿ ಮದುವೆಯಾದ ನಟ ಪ್ರಭುದೇವ್ ಅವರು  ಮೂರನೇ ಮದುವೆಗೆ ಸಿದ್ದರಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈಗ ಕೇಳಿಬಂದ ಸುದ್ದಿ ಏನೆಂದರೆ ನಟ ಪ್ರಭುದೇವ್ ಅವರು ಈಗಾಗಲೇ ಮೂರನೇ ಮದುವೆ ಆಗಿದ್ದಾರಂತೆ.

ಮುಂಬೈನ ಮಹಿಳಾ ವೈದ್ಯರೊಬ್ಬರನ್ನು ಮೇ ತಿಂಗಳಲ್ಲಿ ಮದುವೆಯಾಗಿದ್ದಾರಂತೆ. ಈ ಬಗ್ಗೆ ಪ್ರಭುದೇವ್ ಅವರ ಸಹೋದರ ರಾಜು ಸುಂದರಂ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಪ್ರಭುದೇವ್ ಅವರು ವೈದ್ಯೆ ಹಿಮಾನಿಯನ್ನು ಮೇ ತಿಂಗಳಿನಲ್ಲಿ ವಿವಾಹವಾದರು ಎಂದು ಹೇಳಿದ್ದಾರೆ ಎನ್ನಲಾಗಿದೆ.
 


ಇದರಲ್ಲಿ ಇನ್ನಷ್ಟು ಓದಿ :