ಬೆಂಗಳೂರು: ತಮ್ಮ ಮುಂಬರುವ ಸಿನಿಮಾ ಕಡುವ ಪ್ರಚಾರಾರ್ಥವಾಗಿ ಬೆಂಗಳೂರಿಗೆ ಬಂದಿರುವ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಕನ್ನಡಿಗರನ್ನು ಹೊಗಳಿದ್ದಾರೆ.ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಕೆಜಿಎಫ್ 2, 777 ಚಾರ್ಲಿ ಸಿನಿಮಾವನ್ನು ಮಲಯಾಳಂನಲ್ಲಿ ಪ್ರೆಸೆಂಟ್ ಮಾಡಿದ್ದ ಪೃಥ್ವಿರಾಜ್ ಇಲ್ಲಿನ ಸಿನಿಮಾಗಳು ಜನಪ್ರಿಯವಾಗುತ್ತಿರುವ ರೀತಿ ನೋಡಿದರೆ ಈಗ ಸಿನಿಮಾ ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.ಅಲ್ಲದೆ, ತಾವು ನಟಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಜನಗಣಮನ’ ಸಿನಿಮಾ ಬೆಂಗಳೂರಿನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದಿರುವುದರ