ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಪೋಷಕ ನಟರಾದ ರಾಕ್ ಲೈನ್ ಸುಧಾಕರ್ ಇನ್ನಿಲ್ಲವಾಗಿದ್ದಾರೆ. ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.ಹಲವು ಸಿನಿಮಾಗಳಲ್ಲಿ ಹಾಸ್ಯ ನಟ, ಪೋಷಕ ನಟರಾಗಿ ಗುರುತಿಸಿಕೊಂಡಿದ್ದ ಸುಧಾಕರ್ ಇಂದು ಶೂಟಿಂಗ್ ಗೆಂದು ಮೇಕಪ್ ಹಚ್ಚಿ ಕೂತಿರುವಾಗಲೇ ಹೃದಯಾಘಾತಕ್ಕೊಳಗಾಗಿದ್ದರು ಎನ್ನಲಾಗಿದೆ. ಅವರ ಸಾವಿಗೆ ನಿರ್ದೇಶಕ ತರುಣ್ ಸುಧೀರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅಣ್ಣಾ ಎಂತಲೇ ಅವರನ್ನು ಕರೆಯುತ್ತಿದ್ದೆ. ಅವರ ಸಾವು ಆಘಾತ ತಂದಿದೆ ಎಂದಿದ್ದಾರೆ. ಪಂಚರಂಗಿ, ಟೋಪಿವಾಲ, ಮಿಸ್ಟರ್ ಆಂಡ್