ಹೈದರಾಬಾದ್ : ಬಹಳ ಹಿಂದಿನಿಂದಲೂ ಮೆಗಾ ಹೀರೋ ಸಾಯಿ ತೇಜ್ ಅವರು ಮದುವೆಯಾಗಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿತ್ತು. ಆದರೆ ಇದೀಗ ಸ್ವತಃ ನಟ ಸಾಯಿ ತೇಜ್ ಅವರೇ ತಮ್ಮ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ವೈಷ್ಣವ್ ತೇಜ್ ಅವರ ‘ಉಪ್ಪೇನಾ’ ಚಿತ್ರ ಪ್ರಚಾರದ ಅಂಗವಾಗಿ ನಡೆದ ಸಂದರ್ಶನದಲ್ಲಿ ಭಾಗವಹಿಸಿದ್ದ ಸಾಯಿ ತೇಜ್ ಅವರು ನಾನು ಡೇಟಿಂಗ್ ಮಾಡುತ್ತಿಲ್ಲ ನನ್ನ ಮದುವೆ ಮೇ ತಿಂಗಳಿನಲ್ಲಿ ನಡೆಯಲಿದೆ ಎಂದು ತಮಾಷೆ ಮಾಡಿದ್ದಾರೆ.