ಹೈದರಾಬಾದ್: ಕನ್ನಡದಲ್ಲಿ ಅಮೃತವರ್ಷಿಣಿ ಸಿನಿಮಾ ಮೂಲಕ ಖ್ಯಾತರಾಗಿದ್ದ ಬಹುಭಾಷಾ ನಟ ಶರತ್ ಬಾಬು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.ಅವರಿಗೆ 71 ವರ್ಷ ವಯಸ್ಸಾಗಿತ್ತು. ಬಹಳ ದಿನಗಳಿಂದ ಶರತ್ ಬಾಬು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.1973 ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಶರತ್ ಬಾಬು ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿ ಸಿನಿ ಪ್ರಿಯರ ಮನ ಗೆದ್ದಿದ್ದರು. ಸ್ಪುರದ್ರೂಪಿ ನಟರಾಗಿದ್ದ ಶರತ್ ಬಾಬು 40 ವರ್ಷಗಳ