ಬೆಂಗಳೂರು : ಸ್ಯಾಂಡಲ್ವುಡ್ ನ ದಿಲ್ವಾಲಾ ಚಿತ್ರದ ನಟ ಸುಮಂತ್ ಶೈಲೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಹೌದು. ವಿಶೇಷವೆಂದರೆ ಸ್ಯಾಂಡಲ್ವುಡ್ ಮತ್ತೊಬ್ಬ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಮದುವೆಯಾಗಲಿರುವ ಡಿಸೆಂಬರ್ 12ರಂದೇ ನಟ ಸುಮಂತ್ ಶೈಲೇಂದ್ರ ಕೂಡ ಹಸೆಮಣೆ ಏರಲಿದ್ದಾರಂತೆ. ನಟ ಸುಮಂತ್ ಶೈಲೇಂದ್ರ ಅವರು ಅನಿತಾ ಎಂಬುವವರ ಜೊತೆ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ವಿವಾಹವಾಗಲಿದ್ದಾರೆ. ಡಿಸೆಂಬರ್ 11ರಂದು ಬೆಂಗಳೂರು ಪ್ಯಾಲೇಸ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.