ಅಭಿಮಾನಿಯ 3 ವರ್ಷಗಳ ಕನಸನ್ನು ಈಡೇರಿಸಿದ ನಟ ಸೂರ್ಯ

ಚೆನ್ನೈ| pavithra| Last Modified ಗುರುವಾರ, 19 ನವೆಂಬರ್ 2020 (11:21 IST)
ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಕೂಡ ಒಬ್ಬರು, ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ.   

ಇತ್ತೀಚೆಗಷ್ಟೇ ಸೂರ್ಯ ಅಭಿನಯದ ಸುರೈಪೊಟ್ರು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ, ಹಾಗೇ ಮುಂದೆ ಸೂರ್ಯ ಅವರು ಗೌತಮ್ ಮೆನನ್ ಅವರ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ವೇಳೆ ಟ್ವೀಟರ್ ನಲ್ಲಿ ಅಭಿಮಾನಿಯೊಬ್ಬರು ಕಳೆದ 3 ವರ್ಷದಿಂದ ಟ್ವೀಟರ್ ನಲ್ಲಿದ್ದಾರೆ ಆದರೆ ನಟ  ಸೂರ್ಯ ಇಲ್ಲಿಯವರೆಗೆ ತಮ್ಮ ಪೋಸ್ಟ್ ನ್ನು ಸಹ ಇಷ್ಟಪಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿದ ಸೂರ್ಯ ಅವರ ಟ್ವಿಟ್ ನ್ನು ಮರು ಪೋಸ್ಟ್ ಮಾಡಿ “ನಿಮ್ಮ ಪ್ರೀತಿಗೆ ಧನ್ಯವಾದ” ಎಂದು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಅವರು ಅಭಿಮಾನಿಯ 3 ವರ್ಷಗಳ ಕನಸನ್ನು ಕೊನೆಗೂ ಈಡೇರಿಸಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :