Widgets Magazine

ನಟ ಸುಶಾಂತ್ ಸಿಂಗ್, ದಿಶಾ ಸಾವಿಗೆ ಆ ಪಾರ್ಟಿಯಲ್ಲಿ ಸಿಕ್ಕಿತಾ ಕಾರಣ?

ಮುಂಬೈ| Jagadeesh| Last Modified ಶನಿವಾರ, 12 ಸೆಪ್ಟಂಬರ್ 2020 (11:06 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.


 ಸುಶಾಂತ್ ಸಿಂಗ್ ಮತ್ತು ದಿಶಾ ಸಾಲಿಯನ್ ಸಾವಿನ ನಡುವಿನ ಸಂಬಂಧವನ್ನು ಕಂಡುಹಿಡಿಯಲು
ಫಾರ್ಮ್‌ಹೌಸ್ ನಲ್ಲಿ ನಡೆದ ಪಾರ್ಟಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಕೇಂದ್ರ ತನಿಖಾ ದಳವು ಪ್ರಸ್ತುತ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದೆ.

ಸುದ್ದಿ ವಾಹಿನಿಯೊಂದರ ಪ್ರಕಾರ, ಎಸ್‌ಎಸ್‌ಆರ್‌ನ ಮಾಜಿ ವ್ಯವಸ್ಥಾಪಕ ದಿಶಾ ಸಾಲಿಯನ್ ಮತ್ತು ಸುಶಾಂತ್ ಅವರ ಸಾವಿನ ನಡುವಿನ ಸಂಬಂಧವನ್ನು ಕಂಡುಹಿಡಿಯಲು ರಾಜಕಾರಣಿ ಆಯೋಜಿಸಿದ್ದ ಫಾರ್ಮ್‌ಹೌಸ್ ನಲ್ಲಿ ನಡೆದ ಪಾರ್ಟಿಯಲ್ಲಿನ ಮಾಹಿತಿ ಬಗ್ಗೆ ಸಿಬಿಐ ಈಗ ಪರಿಶೀಲಿಸುತ್ತಿದೆ.

ಮತ್ತೊಂದು ವರದಿಯ ಪ್ರಕಾರ, ಈ ಪ್ರಕರಣದಲ್ಲಿ ಕೆಲವು ಬಾಲಿವುಡ್ ಖ್ಯಾತನಾಮರನ್ನು ಎನ್‌ಸಿಬಿ ಕರೆಸಿಕೊಳ್ಳಲಿದೆ. ಈ ಪ್ರಕರಣದಲ್ಲಿ ಸುಮಾರು 25 ಎ-ಲಿಸ್ಟರ್ ಬಾಲಿವುಡ್ ಸೆಲೆಬ್ರಿಟಿಗಳ ಹೆಸರನ್ನು ಬಂಧಿತೆ ರಿಯಾ ಚಕ್ರವರ್ತಿ ಬಾಯಿ ಬಿಟ್ಟಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :