ಮುಂಬೈ|
Jagadeesh|
Last Modified ಶನಿವಾರ, 1 ಆಗಸ್ಟ್ 2020 (20:56 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ಪ್ರತಿದಿನ ಹೊಸ ತಿರುವು ತೆಗೆದುಕೊಳ್ಳುತ್ತಿದೆ.
ಈಗ ಬಿಹಾರ ಪೊಲೀಸರು ಆತ್ಮಹತ್ಯೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಿಹಾರ ಪೊಲೀಸ್ ಡಿಜಿಪಿ ಮಾತನಾಡಿದ್ದು, ಮುಂಬೈ ಪೊಲೀಸರನ್ನು ದೂಷಿಸಲು ಸಾಧ್ಯವಿಲ್ಲ ಮತ್ತು ಬಿಹಾರ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಲಿದ್ದಾರೆ ಎಂದಿದ್ದಾರೆ.
ತನಿಖೆಯಿಂದ ನೆಮ್ಮದಿ ಸಿಗದಿದ್ದರೆ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ಸಿಬಿಐ ತನಿಖೆಗೆ ಒತ್ತಾಯಿಸಬಹುದು ಎಂದು ಡಿಜಿಪಿ ಖಚಿತಪಡಿಸಿದ್ದಾರೆ.