ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಬಾಲಿವುಡ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನಟನ ಅಭಿಮಾನಿಗಳಲ್ಲಿ ಮಡುಗಟ್ಟಿದ ದುಃಖ ಇನ್ನೂ ಮಾಯವಾಗಿಲ್ಲ. ನಟನ ಸಾವಿನ ಕೇಸ್ ತನಿಖೆಯನ್ನು ಸಿಬಿಐಗೆ ಸುಪ್ರೀಂ ಕೋರ್ಟ್ ವಹಿಸಿದ್ದು, ತನಿಖೆ ಚುರುಕುಗೊಂಡಿದೆ. ಈ ನಡುವೆ ಸುಶಾಂತ ಸಿಂಗ್ ರಜಪೂತ್ ಶವಪರೀಕ್ಷೆ ವರದಿ ಪರಿಶೀಲಿಸುವುದಕ್ಕಾಗಿಯೇ ತಜ್ಞರ ತಂಡವನ್ನು ರಚನೆ ಮಾಡಲಾಗಿದೆ.ಏಮ್ಸ್ ನಿಂದ ಐವರು ಸದಸ್ಯರ ವೈದ್ಯಕೀಯ ಮಂಡಳಿಯ ವಿಧಿವಿಜ್ಞಾನ ತಜ್ಞರಿಗೆ ಜವಾಬ್ದಾರಿ ವಹಿಸಲಾಗಿದೆ.ಏಮ್ಸ್ ಫೊರೆನ್ಸಿಕ್ ವಿಭಾಗದ