ನಿರ್ಮಾಪಕ ಕರಣ್ ಜೋಹರ್ ಗೆ ವಿಶೇಷ ಉಡುಗೊರೆ ನೀಡಿದ ನಟ ವಿಜಯ್ ದೇವರಕೊಂಡ

ಹೈದರಾಬಾದ್| pavithra| Last Modified ಶನಿವಾರ, 30 ಜನವರಿ 2021 (10:29 IST)
ಹೈದರಾಬಾದ್ : ನಟ ವಿಜಯ್ ದೇವರಕೊಂಡ ಅವರ ಉಡುಗೆ ಶೈಲಿ ವಿಶೇಷವಾಗಿ ಯುವಕರಿಗೆ ಜನಪ್ರಿಯವಾಗಿದೆ. ಸಾಂದರ್ಭಿಕವಾಗಿ ವಿಜಯ್  ಉದ್ಯಮದ ನಟರಿಗೆ ವಿಶೇಷ ಉಡುಪುಗಳನ್ನು ತಯಾರಿಸುತ್ತಾರೆ ಮತ್ತು ಉಡುಗೊರೆಯಾಗಿ ಕಳುಹಿಸುತ್ತಾರೆ. ಆ ಮೂಲಕ ಇದೀಗ ಅವರು ನಿರ್ಮಾಪಕರ ಮನಸ್ಸು ಗೆದ್ದಿದ್ದಾರೆ ಎನ್ನಲಾಗಿದೆ.
ಧರ್ಮ ಪ್ರೊಡಕ್ಷನ್ಸ್ ನ ಮುಖ್ಯಸ್ಥ ಮತ್ತು ಲಿಗರ್ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಗೆ ವಿಶೇಷ ಡೆನಿಮ್ ಜಾಕೆಟ್ ವಿನ್ಯಾಸ ಮಾಡಿ ಕಳುಹಿಸಿದ್ದಾರೆ. ಡ್ರೆಸ್ಸಿಂಗ್ ನಲ್ಲಿ ಇತ್ತೀಚಿನ ಟ್ರೆಂಡ್ ಗಳನ್ನು ಅನುಸರಿಸುವ ಕರಣ್ ವಿಜಯ್ ಕಳುಹಿಸಿದ ಹೊಸ ಜಾಕೆಟ್ ನಿಂದ ಸಂತಸಗೊಂಡಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.>


ಇದರಲ್ಲಿ ಇನ್ನಷ್ಟು ಓದಿ :