Widgets Magazine

ಪತ್ನಿ ರಾಧಿಕಾಳ ಬಯಕೆ ತೀರಿಸಿದ ನಟ ಯಶ್

ಬೆಂಗಳೂರು| pavithra| Last Modified ಶುಕ್ರವಾರ, 12 ಅಕ್ಟೋಬರ್ 2018 (09:15 IST)
ಬೆಂಗಳೂರು : ನಟ ಯಶ್
ಅವರ
ಪತ್ನಿ ನಟಿ ರಾಧಿಕಾ ಪಂಡಿತ್ ತಾಯಿಯಾಗುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಇದೀಗ ನಟ ಯಶ್ ತಮ್ಮ ಪತ್ನಿಯ ಬಸುರಿ ಬಯಕೆಯನ್ನು ತೀರಿಸಿದ್ದಾರಂತೆ.



ಹೌದು. ಪತ್ನಿ ರಾಧಿಕಾ ಪಂಡಿತ್ ಅವರ ಆಸೆಯಂತೆ ಅವರಿಗಿಷ್ಟವಾದ ಸ್ಪೆಷಲ್ ಅಡುಗೆಗಳನ್ನು ತಮ್ಮ ಕೈಯಾರೆ
ರೆಡಿ ಮಾಡಿ ತಿನಿಸಿದ್ದಾರಂತೆ.


ಅದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಪತಿ ಎಲ್ಲ ಕೆಲಸಕ್ಕೂ ಸೈ. ಅದು ನಟನೆಯಾಗಲೀ, ಅಡುಗೆ ತಯಾರಿಕೆಯಾಗಲೀ. ಮಿ. ರಾಕಿಂಗ್ ಸ್ಟಾರ್ ಮಾಸ್ಟರ್ ಶೆಫ್ ಎಂದು ಟ್ಯಾಗ್‍ಲೈನ್ ಜೊತೆ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :