ಬೆಂಗಳೂರು|
pavithra|
Last Modified ಶುಕ್ರವಾರ, 29 ಜೂನ್ 2018 (11:07 IST)
ಬೆಂಗಳೂರು : ನಟ ಸೃಜನ್ ಲೋಕೇಶ್ ಅವರು
ಸಿಹಿಸುದ್ದಿಯೊಂದನ್ನು ಕೂಡ
ತಮ್ಮ ಹುಟ್ಟುಹಬ್ಬ ದಿನದಂದು ನಟ ಸೃಜನ್ ಲೋಕೇಶ್ ಅವರು ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಬಂಡಿ ಮಹಾಂಕಾಳಿ ದೇವಸ್ಥಾನದಲ್ಲಿ ತಮ್ಮ
ಪತ್ನಿ ಗ್ರೀಷ್ಮಾ ಧನ್ವಂತರಿ ಜೊತೆ ಹೋಮವನ್ನು ಮಾಡಿದ್ದಾರೆ. ಈ ಹೋಮದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.
ಹಾಗೇ ತಂದೆ ಹೆಸರಿನಲ್ಲಿ 'ಲೋಕೇಶ್ ಪ್ರೊಡಕ್ಷನ್ಸ್' ಎಂಬ ಸಂಸ್ಥೆ ಹುಟ್ಟುಹಾಕಿದ ಸೃಜನ್ ಲೋಕೇಶ್ ಅವರು ಬಹಳ ಅದ್ಭುತವಾದ ರಿಯಾಲಿಟಿ ಶೋಗಳನ್ನ ನೀಡಿ ಜನರನ್ನು ರಂಜಿಸಿದ್ದಾರೆ. ಆದರೆ ಇಲ್ಲಿಯವರೆಗೂ ಕಿರುತೆರೆಗೆ ಮಾತ್ರ ಸೀಮಿತವಾಗಿದ್ದ 'ಲೋಕೇಶ್ ಪ್ರೊಡಕ್ಷನ್ಸ್' ಇದೀಗ ಬೆಳ್ಳಿತೆರೆಗೂ ಕಾಲಿಡಲು ಸಜ್ಜಾಗಿದೆಯಂತೆ. ‘ಈ ವರ್ಷ ಸಿನಿಮಾ ಪ್ರೊಡಕ್ಷನ್ ಕೂಡ ಶುರು ಮಾಡಬೇಕು ಅಂತಿದ್ದೀವಿ. ಅದರ ಕೆಲಸ ಆಗಲೇ ಶುರು ಮಾಡಿದ್ದೇವೆ. ಬರೀ ದೊಡ್ಡ ಹೀರೋಗಳಿಗೆ ಮಾತ್ರ ಸಿನಿಮಾ ಮಾಡಬೇಕು ಅಂತಿಲ್ಲ. ಒಳ್ಳೆ ಕಥೆ ಇದ್ದರೆ, ಹೊಸಬರಿಗೂ ಚಾನ್ಸ್ ಕೊಡುತ್ತೇವೆ ಎಂದು ಸೃಜನ್ ಅವರು ತಿಳಿಸಿದ್ದಾರೆ.