Widgets Magazine

ನಟಿ ಐಂದ್ರಿತಾ ರೇ, ನಟ ಸಂತೋಷ್ ಗೆ ನೂರು ಜನ್ಮಕು ನಂಟು?

ಬೆಂಗಳೂರು| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (19:07 IST)

ಸ್ಯಾಂಡಲ್ ವುಡ್ ನಲ್ಲಿ ಈಗೇನಿದ್ದರೂ ಡ್ರಗ್ಸ್ ಮಾಫಿಯಾದ್ದೇ ಸದ್ದು ಜೋರಾಗಿದೆ.

ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ.

ಈ ನಡುವೆ ನಟ ಸಂತೋಷಕುಮಾರ್ ಅವರೂ ಸಿಸಿಬಿಯಿಂದ ವಿಚಾರಣೆಗೆ ಒಳಗಾಗಿದ್ದಾರೆ.

 

ಚಿತ್ರ ವಿತರಕ ಹಾಗೂ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರು ನಟಿ ಐಂದ್ರಿತಾ ಹಾಗೂ ಸಂತೋಷ್ ಗೆ ಟಾಂಗ್ ನೀಡಿದ್ದಾರೆ.

ಫೋಟೋ ಪೋಸ್ಟ್ ಮಾಡಿರುವ ಅವರು, ನೂರೂ ಜನ್ಮಕು ಚಿತ್ರದ ನಾಯಕ ಹಾಗೂ ನಾಯಕಿ, ಇಬ್ಬರೂ ಡ್ರಗ್ಸ್ ಜಾಲದಲ್ಲಿ ಆರೋಪ ಎದುರಿಸುತ್ತಿರುವುದು ಏಳೇಳು ಜನುಮದ ವಿಪರ್ಯಾಸ. ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ, ಕಣ್ಣು ಕೈ ಕಾಲ್, ಕಿವಿ, ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಹುಚ್ಚರಾಗುವಿರಾ ಎಂದು ಪರೋಕ್ಷವಾಗಿ ತಿವಿದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :