ಬೆಂಗಳೂರು: ಕಳೆದ ಒಂದು ವಾರದಿಂದ ನಡೆಯುತ್ತಿರುವ ನಟಿ ಅಮೂಲ್ಯ ಮದುವೆ ಕಾರ್ಯಕ್ರಮಗಳಿಗೆ ಇಂದು ಕ್ಲೈಮ್ಯಾಕ್ಸ್ ಸಿಗಲಿದೆ. ಅಮೂಲ್ಯ-ಜಗದೀಶ್ ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಇಂದು ವಿವಾಹವಾಗಲಿದ್ದಾರೆ ಆದಿಚುಂಚನಗಿರಿಯ ಕಾಳಭೈರವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಅಮೂಲ್ಯ, ಜಗದೀಶ್ ಜತೆ ಸಪ್ತಪದಿ ತುಳಿಯಲಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿರಲಿದ್ದಾರೆ.ಮಾಜಿ ಕಾರ್ಪೋರೇಟರ್ ರಾಮಚಂದ್ರಪ್ಪ ಪುತ್ರ ಜಗದೀಶ್ ನಟಿ ಅಮೂಲ್ಯ ಕೈ ಹಿಡಿಯಲಿರುವ ವರ. ಮಾರ್ಚ್ ನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬುಧವಾರ