ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರಿಗೆ ಈಗ ಮದುವೆಯ ಸಂಭ್ರಮ. ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿರುವ ಜಗದೀಶ್ ಅವರ ಜೊತೆ ಶುಕ್ರವಾರ ಆದಿಚುಂಚನಗಿರಿ ಮಠದಲ್ಲಿ ನಟಿ ಅಮೂಲ್ಯ ವಿವಾಹ ನೆರವೇರಲಿದೆ. ಇದಕ್ಕೂ ಮುನ್ನ ಇವತ್ತು ಸಂಜೆ ನಟ ಗಣೇಶ್ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮ ನೆರವೇರಲಿದೆ. ಶಿಲ್ಪಾ ಗಣೇಶ್ ಅಮೂಲ್ಯಗಾಗಿ ಸ್ವತಃ ತಾವೇ ಕಾರ್ಯಕ್ರಮ ಆಯೋಜಿಸಿದ್ದು, ಖುದ್ದು ತಾವೇ ತಯಾರಿ ನಡೆಸಿದ್ದಾರೆ. ಪಂಜಾಬಿ ಮತ್ತು ಬಾಂಗ್ರಾ ನೃತ್ಯ