ಮುಂಬೈ: ಘಜನಿ ಸಿನಿಮಾ ಹೀರೋಯಿನ್ ಆಸಿನ್ ಪತಿ ರಾಹುಲ್ ಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಗಳು ನಿನ್ನೆಯಿಂದ ಭಾರೀ ಸುದ್ದಿ ಮಾಡಿತ್ತು. ಆಸಿನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಫೋಟೋಗಳನ್ನು ಡಿಲೀಟ್ ಮಾಡಿದ್ದು ಆ ಸುದ್ದಿಗಳಿಗೆ ಪುಷ್ಠಿ ನೀಡಿತ್ತು. ಇದರ ಬೆನ್ನಲ್ಲೇ ಕೆಲವು ಮಾಧ್ಯಮಗಳಲ್ಲಂತೂ ರಾಹುಲ್ ಬೇರೊಬ್ಬ ಯುವತಿಯೊಂದಿಗೆ ನಂಟು ಹೊಂದಿದ್ದಾರೆ. ಅದಕ್ಕೆ ಆಸಿನ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಇದೀಗ ವದಂತಿಗಳು ತೀವ್ರವಾಗುತ್ತಿದ್ದಂತೆ ಸ್ವತಃ ಆಸಿನ್ ಸ್ಪಷ್ಟನೆ